"ಅಭಿ" ದಿನೇಶ್ ಬಾಬು ಅವರ ನಿರ್ದೇಶನದ ಕನ್ನಡ ಚಲನಚಿತ್ರ. ಈ ಚಿತ್ರವು ೨೦೦೩ರಲ್ಲಿ ಬಿಡುಗಡೆ ಆಯಿತು. ಪುನೀತ್ ರಾಜ್‌ಕುಮಾರ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರ ನಟಿ ರಮ್ಯಾ ಅವರ ಚೊಚ್ಚಲ ಚಿತ್ರವಾಗಿದೆ. ಗುರುಕಿರಣ್ ಸಂಗೀತ ಸಂಯೋಜನೆಯ ಚಿತ್ರಕ್ಕೆ ಕನ್ನಡದ ಹಿರಿಯ ನಟ ರಾಜಕುಮಾರ್ ಅವರೂ ಕೂಡ ಹಾಡಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ಅಭಿಮನ್ಯು ಎಂದು ಮರುನಿರ್ಮಾಣ ಮಾಡಲಾಗಿದ್ದು, ಕಲ್ಯಾಣ್ ರಾಮ್ ಜೊತೆ ರಮ್ಯಾ ಕನ್ನಡ ಭಾಷೆಯ ಚಿತ್ರದಲ್ಲಿ ಅಭಿನಯಿಸಿದ ಪಾತ್ರವನ್ನೇ ಮರು ಅಭಿನಯಿಸಿದ್ದಾರೆ. == ಕಥಾ ಸಾರಾಂಶ == ಅಭಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ ಎಲ್ಲರೂ ಮೆಚ್ಚುವಂಥಹ ಉತ್ತಮ ವ್ಯಕ್ತಿ. ಭಾನು ಕುಟುಂಬವು ಬಾಡಿಗೆ ಮನೆ ಹುಡುಕಿಕೊಂಡು ಅಭಿಯ ಕುಟುಂಬವನ್ನು ಸಂಪರ್ಕಿಸುತ್ತದೆ. ಆರಂಭದಲ್ಲಿ ಭಾನು ಹಾಗೂ ಅಭಿ ನಡುವೆ ವೈಮನಸ್ಸು ಇದ್ದರೂ, ಕ್ರಮೇಣ ಒಬ್ಬರೊನ್ನೊಬ್ಬರು ಅರಿತುಕೊಂಡು ಪರಸ್ಪರ ಪ್ರೀತಿಸತೊಡಗುತ್ತಾರೆ. ಭಾನು ಮುಸ್ಲಿಂ ಮತ್ತು ಅಭಿ ಹಿಂದೂ ಆಗಿರುವುದರಿಂದ, ಭಾನುವಿನ ತಂದೆಗೆ ಈ ಪ್ರೀತಿಗೆ ಒಪ್ಪಿಗೆ ಇರುವುದಿಲ್ಲ. ಅಭಿಯನ್ನು ಥಳಿಸಲು ನಿರ್ಧರಿಸುತ್ತಾನೆ. ಅಭಿ ಹಾಗೂ ಭಾನುವಿನ ತಂದೆಯ ಹೋಡೆದಾಟಗಳು ಉಂಟಾಗುತ್ತದೆ. ಆದರೆ ಬಾನು ಅಸನ್ನು ತಡೆಯುತ್ತಾಳೆ. ಭಾನುವಿನ ತಂದೆ ಈ ಪ್ರೀತಿಯನ್ನು ತಡೆಯಲು ಕುಟುಂಬ ಸಮೇತ ಬೆಂಗಳೂರು ತೊರೆದು ಹುಬ್ಬಳ್ಳಿ ಸೇರುತ್ತಾರೆ. ಅಭಿ ಭಾನುವನ್ನು ಹುಡುಕಿಕೊಂಡು ಹುಬ್ಬಳ್ಳಿ ಸೇರುತ್ತಾನೆ. ಹೀಗೆ ಭಾನು ಇರುವ ಊರನ್ನು ಸೇರುವ ಅಭಿ ಅಂತಿಮವಾಗಿ ಭಾನುವನ್ನು ಹೇಗೆ ಮದುವೆಯಾಗುತ್ತಾನೆ ಎಂಬುದೇ ಈ ಚಲನಚಿತ್ರದ ಕಥಾ ಹಂದರವಾಗಿದೆ. == ಪಾತ್ರವರ್ಗ == == ನಿರ್ಮಾಣ ಮತ್ತು ಬಿಡುಗಡೆ == ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ೨೫ ಏಪ್ರಿಲ್‌ ೨೦೦೩ರಲ್ಲಿ ಬಿಡುಗಡೆಯಾದ "ಆಭಿ" ಚಿತ್ರವು ಚಲನಚಿತ್ರ ಮಂದಿರಗಳಲ್ಲಿ ಸತತ ೧೫೦ ದಿನಗಳ ಪ್ರದರ್ಶನವನ್ನು ಕಂಡಿದೆ. == ಹಾಡುಗಳು == "ಆಭಿ" ಚಿತ್ರಕ್ಕೆ ಗುರುಕಿರಣ್‌ ಹಿನ್ನಲೆ ಹಾಗೂ ಹಾಡುಗಳಿಗೆ ಸಂಗೀತವನ್ನು ಸಂಯೋಜಿಸಿದ್ದಾರೆ ಹಾಗೂ ಹಾಡಿನ ಹಕ್ಕುಗಳನ್ನು ಅಶ್ವಿನಿ ಆಡಿಯೋ ಸಂಸ್ಥೆ ಹೊಂದಿದೆ. == ಉಲ್ಲೇಖಗಳು ==